logo MP3
head_logo

Shreya Ghoshal Thanmayaladenu Скачать

main img

Shreya Ghoshal

Thanmayaladenu

80 Прослушиваний
04:18
Все треки Shreya Ghoshal
Слушать
Скачать песню

Текст песни

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ
ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು
ಹರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ

ತಪ್ಪು ತಿಳಿಯ ಬೇಡ ನೀನು ಕನಸಿನಲ್ಲಿ ಕಂಡರೇ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೇ
ಈ ಮನಸಿಗೆ ಭಾಸವು
ಇಲ್ಲೇ ನೀನು ನನ್ನ ಕೂಗಿದಂತೆ

ಸಣ್ಣಾ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೆ
ಮನಸಲ್ಲೇ ಅಂದ ಮಾತು ತಡವಾಗಿ ಕೇಳಿತೇನು

ಗೊತ್ತಿಲ್ಲದೆ ನಾ ಗೀಚಲೇ ಹೆಸರೊಂದನು

ಅಳಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ

ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ

ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯು ಹೇಳಿದೇ ಸಾಂತ್ವನ
ನನ್ನ ವಿರಹವು ನಿನ್ನಿಂದ ಇನ್ನು ಚಂದ
ವಿವರಿಸಲಾರೆ ಎಲ್ಲ ನಾ ದೂರದಿಂದ
ನೆನಪನ್ನೂ ರಾಶಿ ಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲಿ ನಾ ಹುಡುಕಲೇ ನಗುವೊಂದನು
ಒರೆಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳೂ ಮರೆಯುವ ಮುನ್ನವೇ

На странице доступен трек Thanmayaladenu от Shreya Ghoshal. Слушайте онлайн или загрузите в один клик бесплатно на свое устройство.