logo MP3
head_logo

Rajesh Ondonde Скачать

main img

Rajesh

Ondonde

84 Прослушиваний
04:33
Все треки Rajesh
Слушать
Скачать песню

Текст песни

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು
ಓ ಮೌನ
ಮಾತಾಡು

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ

ಸುಳ್ಳು ಸುಳ್ಳೇ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟೋರ್ಯಾರು
ಕೆನ್ನೆ ನಿಂದ, ಮುತ್ತು ನಂದ
ಬಗೆ ಹರಿಯದ ಒಗಟು ಇದು
ಮೊದಲು ಅಪ್ಪಿಕೊಂಡ
ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೋ ಸನಿಹ
ಸನಿಹದಲಿ ಯಾಕಿದೆ ವಿರಹ
ಹೇಳುವೆಯಾ

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ

ಓ, ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಆ ಮಂಕಾದ ರಾತ್ರೀಲಿ ಬಿಕ್ಕಳಿಸಿದ್ಯಾರು
ತಪ್ಪು ನಿಂದ, ತಪ್ಪು ನಂದ
ಕೊನೆಗಾಣದ ಒಗಟು ಇದು
ಮುಂಜಾನೆ ನಿದ್ರೇಲಿ
ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೇ ಕನಸು
ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ

На странице доступен трек Ondonde от Rajesh. Слушайте онлайн или загрузите в один клик бесплатно на свое устройство.